ಹಲವಾರು ಸೋಂಕುಕಾರಕಗಳು ಕೆಲವುವೇಳೆ, ಬಹುಮಟ್ಟಿಗೆ ಆಕಸ್ಮಿಕವಾಗಿ, ಆಹಾರದಲ್ಲಿ ಸೇರಿಕೊಂಡು ವಿಷವೇರಿಕೆಗೆ ಕಾರಣವಾಗಬಹುದು. ವಿಷಮಶೀತಜ್ವರ, ಏಕಾಣುಜೀವಿಕ ಆಮಶಂಕೆ, ಅಮೀಬದ (ಅಮೀಬಿಕ್) ಆಮಶಂಕೆ, ಕೆಂಜ್ವರ (ಸ್ಕಾರ್ಲೆಟ್ ಫೀವರ್), ಗಂಟಲಮಾರಿ (ಡಿಫ್ತೀರಿಯ), ಬ್ರೊಸೆಲ್ಲಬೇನೆ (ಬ್ರೊಸೆಲ್ಲೋಸಿಸ್), ವೀಲನ ರೋಗ, ಸೋಂಕುಕಾರಕ ಯಕೃತ್ಉರಿತ (ಹೆಪಟೈಟಿಸ್), ನರೆಮಜ್ಜೆಯುರಿತ (ಪೋಲಿಯೊ ಮೈಲೈಟಿಸ್)-ಇನ್ನೂ ಎಷ್ಟೋ ರೋಗಗಳ ಸೋಂಕುಕಾರಕಗಳೂ ಆಹಾರ ವಿಷವೇರಿಕೆಗೆ ಕಾರಣವಾಗಬಹುದು. ರೋಗಿಗಳ ಮಲದಲ್ಲಿ ಕಂಡುಬಂದದ್ದರಿಂದಲೇ ಆಹಾರ ವಿಷವೇರಿಕೆಗೆ ಕಾರಣಗಳೆಂದು ಇನ್ನೂ ಎಷ್ಟೋ ಏಕಾಣುಜೀವಿಗಳ ಮೇಲೆ ಅನುಮಾನವಿದ್ದರೂ ರೋಗಕ್ಕೆ ಅದೇ ಕಾರಣವೆನ್ನಲು ಸರಿಯಾದ ಪುರಾವೆಗಳಿಲ್ಲ (ನೋಡಿ- ಆಹಾರದ-ಜೋಪಾನಿಕೆ, ದಾಸ್ತಾನು (ಮನೆಯಲ್ಲಿ; ಆಹಾರದ-ಜೋಪಾಸನೆ; ಏಕಾಣುಜೀವಿಕ ಮತ್ತು ಸೋಂಕಿನ-ರೋಗಗಳು).

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ